ಹಲಸಿನ ಹಣ್ಣಿನ ಪಾಯಸ



ಬೇಕಾಗುವ ಪದಾರ್ಥಗಳು:
  • ಲೋಟ ಹಲಸಿನ ಸೊಳೆ 
  • ರವೆ  1/4 ಕಪ್
  • ಬೆಲ್ಲ / ಸಕ್ಕರೆ - 1 ಕಪ್
  • ರುಬ್ಬಿದ ಕಾಯಿತುರಿ  1 ಕಪ್
  • 4 ಲೋಟ ನೀರು

ಮಾಡುವ ವಿಧಾನ:
  • ರವೆಗೆ 4 ಲೋಟ ನೀರು ಹಾಕಿ ಕಾಯಿಸಿ.
  • ಅದಕ್ಕೆ ಹಲಸಿನ ಸೊಳೆ + ಬೆಲ್ಲ ಅಥವಾ ಸಕ್ಕರೆ + ಕಾಯಿತುರಿ ಹಾಕಿ ನಿಧಾನವಾಗಿ ಕುದಿಸಿ


ಉಪಯುಕ್ತ ಮಾಹಿತಿ :

ಮಾಡಲು ಬೇಕಾಗುವ ಅಂದಾಜು ಸಮಯ -- 15 ನಿಮಿಷಗಳು.

ಕೃಪೆ: Satish Shanbhag, Valagalli, Kumta

ಸಿಹಿ ಅಕ್ಕಿ ಶಾವಿಗೆ / Sihi Akki Shaavige

ಬೇಕಾಗುವ ಪದಾರ್ಥಗಳು:

  • ಉಪ್ಪು
  • ಅಕ್ಕಿ
  • ಆಲೆಮನೆ ಬೆಲ್ಲ
ಮಾಡುವ ವಿಧಾನ:


  • ಅಕ್ಕಿಯನ್ನು ಒಂದೆರಡು ಗಂಟೆ ನೆನೆಸಬೇಕು.
  • ನಂತರ ಅಕ್ಕಿಯನ್ನು ದೋಸೆ ಹಿಟ್ಟಿನ ಹದಕ್ಕೆ ಬೀಸಿ.
  • ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು + ರುಚಿಗೆ ತಕ್ಕಷ್ಟು ಬೆಲ್ಲ ಹಾಕಿ ಪಾತ್ರೆಯನ್ನು ಒಲೆಯ ಮೇಲಿಟ್ಟು, ಮಿಶ್ರಣ ಗಟ್ಟಿಯಾಗುವವರೆಗೆ ಕಲಕಬೇಕು.
  • ಮಿಶ್ರಣವನ್ನು ಉಂಡೆಯಾಕಾರ ಮಾಡಿ, ಕುಕ್ಕರ್ ನಲ್ಲಿಟ್ಟು, (ಕುಕ್ಕರ್ ನ ವೇಟ್ ಹಾಕಬೇಡಿ) ಉಗಿ ಬರುವವರೆಗೆ ಇಡಬೇಕು.
  • ಈಗ ಶಾವಿಗೆ ಒರಳಿನಲ್ಲಿ ಹಾಕಿದರೆ ಸಿಹಿ ಶಾವಿಗೆ ರೆಡಿ.

ಉಪಯುಕ್ತ ಮಾಹಿತಿ :

ಬಿಸಿಯಾಗಿದ್ದಾಗ ತುಪ್ಪ ಅಥವಾ ಉಪ್ಪಿನಕಾಯಿಯೊಂದಿಗೆ ಸವಿಯಲು ಬಲು ರುಚಿ...:)

ಕೃಪೆ: Sharavathi S Raysad,Vaddinakoppa,Sirsi




ಶಂಕರ ಪೊಳೆ (Shankar Pole)



ಶಂಕರ ಪೊಳೆ (Shankar Pole)


ಬೇಕಾಗುವ ಪದಾರ್ಥಗಳು:
  • ಮೈದಾ ಹಿಟ್ಟು - ಲೋಟ 
  • ಉಪ್ಪು - ರುಚಿಗೆ 
  • ಸಕ್ಕರೆ - ಚಮಚ 
  • ಮೆಣಸಿನ ಹಿಟ್ಟು - ಚಮಚ 

 ತಯಾರಿಸುವ ವಿಧಾನ:
  • ಮೈದಾ ಹಿಟ್ಟನ್ನು ಬಿಸಿ ನೀರಿನಲ್ಲಿ ಉಪ್ಪು, ಸಕ್ಕರೆ ಮತ್ತು ಮೆಣಸಿನ ಹಿಟ್ಟು ಹಾಕಿ ಹದವಾಗಿ ಕಲಸಿಕೊಳ್ಳಿ. 
  • ಇದನ್ನು ರೊಟ್ಟಿ ಯಂತೆ  ಲಟ್ಟಿಸಿಕೊಳ್ಳಿ.
  • ಬಾಟಲಿಯ ಮುಚ್ಚಳದಲ್ಲಿ ಕತ್ತರಿಸಿ.    
  • ಹದವಾಗಿ ಕಾದ ಎಣ್ಣೆಯಲ್ಲಿ ಕರಿಯಿರಿ. 

 ಇತರೆ ಮಾಹಿತಿಗಳು : 
  • ಮೈದಾ ಹಿಟ್ಟಿನ ಬದಲು ಗೋಧಿಹಿಟ್ಟನ್ನು ಉಪಯೋಗಿಸಬಹುದು.
  • ಸಾಮಾನ್ಯವಾಗಿ ಮಾಡುವ ಚಪಾತಿ ಅಥವಾ ರೊಟ್ಟಿ ಗಿಂತ ಸ್ವಲ್ಪ ದಪ್ಪವಾಗಿ ಲಟ್ಟಿಸಿಕೊಂಡರೆ  ತಿನ್ನಲು ರುಚಿಯಾಗಿರುತ್ತದೆ. 
  • ಮೆಣಸಿನ ಹಿಟ್ಟನ್ನು ಹಾಕದಿದ್ದರೂ ಚೆನ್ನಾಗಿಯೇ ಇರುತ್ತದೆ. 
  • ಮನೆಯಲ್ಲಿ 'ಚಿರಣಿ' ಇದ್ದರೆ  ಬಾಟಲಿಯ ಮುಚ್ಚಳದ ಬದಲಿಗೆ ಉಪಯೋಗಿಸಿದರೆ ವಜ್ರಾಕೃತಿಯ ಅಥವಾ ಚೌಕಾಕೃತಿಯ ಶಂಕರ ಪೊಳೆ ಮಾಡಬಹುದು.
ಕೃಪೆ: ಅಂಬಿಕಾ ಭಟ್



ಬಾಳೆಹಣ್ಣು ಬನ್ಸ್


        
ಬೇಕಾಗುವ ಸಾಮಗ್ರಿಗಳು
  • ಮೈದಾ - ೨ ಕಪ್
  • ಬಾಳೆಹಣ್ಣು (ನೇಂದ್ರ) - ೫-೬
  • ಉಪ್ಪು - ರುಚಿಗೆ
  • ಜೀರಿಗೆ - ೧ ಚಮಚ
  • ಅಡುಗೆ ಎಣ್ಣೆ - ಕರಿಯಲು
ಮಾಡುವ ವಿಧಾನ
  • ಬಾಳೆ ಹಣ್ಣನ್ನು ಚೆನ್ನಾಗಿ ಕಿವುಚಿ. ಇದಕ್ಕೆ ಮೈದಾ, ಜೀರಿಗೆ ಹಾಗು ಉಪ್ಪು ಸೇರಿಸಿ ಮೃದುವಾಗಿ ಕಲಸಿ,
  • ಈ ಮಿಶ್ರಣವನ್ನು ಒಂದು ಬಿಳಿಯ ಒದ್ದೆ ಬಟ್ಟೆಯಲ್ಲಿ ಸುತ್ತಿಡಿ. ಕನಿಷ್ಠ ೨-೩ ತಾಸು ನೆನೆಯಲು ಬಿಡಿ.
  • ನಂತರ ಇದನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಪೂರಿಯ ಹಾಗೆ ಲಟ್ಟಿಸಿ, ಕಾದ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ.

ಉಪಯುಕ್ತ ಮಾಹಿತಿ :

ಒದ್ದೆ ಬಟ್ಟೆಯಲ್ಲಿ ಸುತ್ತಿಡುವುದರಿಂದ, ಎಣ್ಣೆಯಲ್ಲಿ ಕರಿದಾಗ, ಚೆನ್ನಾಗಿ ಊದುತ್ತದೆ(puffyness).
ಸಣ್ಣ ಉರಿಯಲ್ಲಿ ಕರಿಯುವುದರಿಂದ, ಹಿಟ್ಟಿನ ಒಳ ಪದರ ಚೆನ್ನಾಗಿ ಬೇಯುತ್ತದೆ.

ಕೃಪೆ: ಸೌಮ್ಯ ಹೆಗಡೆ

ಬಾಳೆ ಹಣ್ಣಿನ ರೊಟ್ಟಿ


 ಬೇಕಾಗುವ ಸಾಮಗ್ರಿಗಳು
  • ಬಾಳೆಹಣ್ಣು (ನೇಂದ್ರ) - ೫-೬ (ಮಧ್ಯಮ ಗಾತ್ರ)
  • ಗೋಧಿ ಹಿಟ್ಟು - ೨ ಕಪ್
  • ಉಪ್ಪು - ರುಚಿಗೆ
  • ಅಡುಗೆ ಎಣ್ಣೆ - ೧/೨ ಕಪ್

ಮಾಡುವ ವಿಧಾನ
  • ಬಾಳೆಹಣ್ಣಿನ ಸಿಪ್ಪೆ ತೆಗೆದು ಚೆನ್ನಾಗಿ ಕಿವುಚಿ. 
  • ಇದಕ್ಕೆ ಗೋಧಿ ಹಿಟ್ಟು, ಉಪ್ಪು, ೨ ಚಮಚ ಎಣ್ಣೆ ಹಾಕಿ ಮೃದುವಾಗಿ ರೊಟ್ಟಿಯ ಹದಕ್ಕೆ ಕಲಸಿ. ಬೇಕಾದಲ್ಲಿ ಸ್ವಲ್ಪ ನೀರು ಹಾಕಿ ಕಲಸಿ. 
  • ನಂತರ, ಸಣ್ಣ ಉಂಡೆಗಳನ್ನಾಗಿ ಮಾಡಿ, ಲಟ್ಟಿಸಿ, ಸಣ್ಣ ಉರಿಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಎರಡೂ ಬದಿಗೆ ಬೇಯಿಸಿ.

ಉಪಯುಕ್ತ ಮಾಹಿತಿ :
  • ಇದಕ್ಕೆ ಜೋನಿ ಬೆಲ್ಲ ಮತ್ತು ತುಪ್ಪ ಒಳ್ಳೆಯ ಜೋಡಿ.
  • ತೆಂಗಿನಕಾಯಿ ಚಟ್ನಿಯ ಜೊತೆಯೂ ಸವಿಯಬಹುದು.
ಕೃಪೆ: ಸೌಮ್ಯ ಹೆಗಡೆ

ಅತ್ರಸ / atraasa


ಬೇಕಾಗುವ ಸಾಮಗ್ರಿಗಳು
  • ದೋಸೆ ಅಕ್ಕಿ - ೨ ಕಪ್
  • ಬೆಲ್ಲ - ೨ ಕಪ್
  • ತೆಂಗಿನಕಾಯಿ - ೧
  • ಅಡುಗೆ ಎಣ್ಣೆ - ಕರಿಯಲು 
ಮಾಡುವ ವಿಧಾನ

  • ಅಕ್ಕಿಯನ್ನು ೧೦ ನಿಮಿಷ ನೆನೆಸಿ. ನಂತರ, ನೀರು ಬಸೆದು . ಅದನ್ನು ಮಿಕ್ಷಿಗೆ ಹಾಕಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ.
  • ತೆಂಗಿನ ತುರಿಗೆ ಬೆಲ್ಲ (ಜೋನಿ ಬೆಲ್ಲ)ವನ್ನು ಹಾಕಿ, ಮದ್ಯಮ ಉರಿಯಲ್ಲಿ ಚೆನ್ನಾಗಿ ಕುದಿಸಿ.
  • ಇದು ಕುದಿಯುತ್ತಿರುವಾಗ, ಅಕ್ಕಿ ಪುಡಿಯನ್ನು ಸ್ವಲ್ಪ ಸ್ವಲ್ಪವೆ ಹಾಕುತ್ತ ಕಲುಕುತ್ತಿರಿ.
  • ಈ ಮಿಶ್ರಣ ದಪ್ಪವಾಗುತ್ತಿದಂತೆ, ಸ್ಟೋವ್ ನಿಂದ ಕೆಳಗಿಳಿಸಿ ತಣಿಯಲು ಬಿಡಿ.
  • ತಣಿದ ನಂತರ ಮತ್ತಷ್ಟು ದಪ್ಪಗಾದ ಈ ಮಿಶ್ರಣವನ್ನು, ಅಂಗೈ ಆಕಾರದಲ್ಲಿ ಒತ್ತಿ, ಕಾದ ಎಣ್ಣೆಯಲ್ಲಿ ಹಾಕಿ ಕೆಂಪಗೆ ಕರಿಯಿರಿ.
ಕೃಪೆ: ಸೌಮ್ಯ ಹೆಗಡೆ