ಅರಿಸಿನ ಕೊಂಬಿನ ಗೊಜ್ಜು ಅಥವಾ ಬಾಳಂತಿ ಗೊಜ್ಜು


ಬೇಕಾಗುವ ಪದಾರ್ಥಗಳು:


  • ಹಸಿ ಅರಿಸಿನ ಕೊಂಬು ಅಥವಾ ಬೇರು - ೧ ಕಪ್
  • ಉಪ್ಪು -  ೧ ಚಮಚ (ರುಚಿಗೆ ತಕ್ಕಷ್ಟು)
  • ಬೆಲ್ಲ - ಅರ್ಧ ಕಪ್ (ರುಚಿಗೆ ತಕ್ಕಷ್ಟು) 
  • ಹುಳಿಸೆ ಹಣ್ಣು - ಸುಲಿದ ಅಡಿಕೆಯಷ್ಟು ಪ್ರಮಾಣ.
  • ಕಾಯಿತುರಿ - ೧ ಕಪ್
  • ಒಣಮೆಣಸು - ೫
  • ಕೊತ್ತುಂಬರಿ ಕಾಳು - ೧ ಚಮಚ 
  • ಉದ್ದಿನಬೇಳೆ - ೧ ಚಮಚ
  • ಹಿಂಗು - ೧ ಕಡಲೆಕಾಳಿನಷ್ಟು
  • ಎಣ್ಣೆ - ಸ್ವಲ್ಪ ಕೊಬ್ಬರಿ ಎಣ್ಣೆ.


ಮಾಡುವ ವಿಧಾನ:


  • ಅರಿಸಿನ ಬೇರನ್ನು ಸಣ್ಣಗೆ ಹೆಚ್ಚಿ ಅದಕ್ಕೆ + ಉಪ್ಪು + ಬೆಲ್ಲ + ಹುಳಿಸೆ ಹಣ್ಣು +  ೨ ಕಪ್ ನೀರು ಹಾಕಿ - ಅದನ್ನು ಬಾಂಡ್ಲಿಯಲ್ಲಿ ಹದವಾಗಿ ಬೇಯಿಸಿ.
  • ಹುರಿದ ಪದಾರ್ಥ: ಇನ್ನೊಂದು ಪಾತ್ರೆಯಲ್ಲಿ -  ಕೊತ್ತುಂಬರಿ ಕಾಳು + ಸಲ್ಪ ಎಣ್ಣೆ + ಹಿಂಗು + ಉದ್ದಿನಬೇಳೆ -- ಇವನ್ನು ಹಾಕಿ ಹುರಿದು ಇಟ್ಟುಕೊಳ್ಳಿ.
  • ಬೇಯಿಸಿ ತಣ್ಣಗಾಗಿಸಿದ ಅರಿಸಿನ ಮಿಶ್ರಣ + ಹುರಿದ ಪದಾರ್ಥ + ಮೆಣಸು + ಕಾಯಿತುರಿ -- ಇವನ್ನು ಮಿಕ್ಸಿಗೆ ಹಾಕಿ ಬೀಸಿ.
  • ಈಗ ನಿಮ್ಮ ಅರಿಸಿನ ಕೊಂಬಿನ ಗೊಜ್ಜು ತಯಾರು.
  • ಬೀಸಿದ ಗೊಜ್ಜನ್ನು ಬಾಣೆಲೆಯಲ್ಲಿ ಹಾಕಿ ಕುದಿಸಿದರೆ ೨-೩ ದಿನ ಇಟ್ಟರೂ ಕೆಡುವದಿಲ್ಲ.   


ಉಪಯೋಗಗಳು:

  • ಇದು ಶರೀರದ ನಂಜನ್ನು ತೆಗೆಯುತ್ತದೆ ಆದಕಾರಣ ಬಾಳಂತಿಯರಿಗೆ ವಿಶೇಷವಾಗಿ ಕೊಡುತ್ತಾರೆ. 
  • ಇದಕ್ಕೆ ಬಾಳಂತಿ ಗೊಜ್ಜು ಎಂದೂ ಕರೆಯುತ್ತಾರೆ.
  • ಮೈ ತುರಿಸುವಿಕೆಗೂ ಉಪಯುಕ್ತ.


ಕೃಪೆ: ಕಲಾವತಿ ಶಾಂತಾರಮ ಭಟ್ ಮುರೂರು, ಧಾರವಾಡ.

No comments:

Post a Comment